ಆಂದೋಲನದ ಪಂಚಶಕ್ತಿಗಳು
೫ ಮುಖ್ಯ ಭಾಗೀದಾರರ ಪಾತ್ರಗಳು
ಕನ್ನಡ ಭಾರತಿ ಜಾಗೃತಿ ಆಂದೋಲನವು ಸಮಾಜದ ಐದು ಪ್ರಮುಖ ಶಕ್ತಿಗಳ ಪರಸ್ಪರ ಸಹಯೋಗದಿಂದ ಸಾಕಾರಗೊಳ್ಳುತ್ತದೆ. ಪ್ರತಿಯೊಬ್ಬ ಭಾಗೀದಾರರಿಗೂ ಇಲ್ಲಿ ಪವಿತ್ರವಾದ ಜವಾಬ್ದಾರಿಯಿದೆ.
ಕಲಿಕಾರ್ಥಿಗಳು
೧. ಕಲಿಯುವವರು (Learners)
ಯಾರು ಭಾಗವಹಿಸಬಹುದು (ವರ್ಗಗಳು):
ಮಕ್ಕಳುಪೋಷಕರುಹೊರನಾಡುವರುಭಾಷೆ ಬರೆದವರು (ಕಲಿಕೆ ಅಪೂರ್ಣವಾದವರು)ಆಸಕ್ತರು
ಮುಖ್ಯ ಜವಾಬ್ದಾರಿ:
ದಿನಕ್ಕೆ ೧ ಗಂಟೆಯಂತೆ ೩೦ ದಿನಗಳ ಕಾಲ ಮಕ್ಕಳಿಂದ ಅಥವಾ ಸ್ವಯಂಸೇವಕರಿಂದ ಪ್ರೀತಿಯಿಂದ ಕನ್ನಡ ಕಲಿಯಲು ಬದ್ಧರಾಗುವುದು.
ಪ್ರಮುಖ ಕಾರ್ಯಗಳು ಮತ್ತು ನಿರೀಕ್ಷೆಗಳು:
೩೦ ದಿನಗಳ ಅವಧಿಯಲ್ಲಿ ನಿರಂತರ ಕಲಿಕೆಯಲ್ಲಿ ಪಾಲ್ಗೊಳ್ಳುವುದು
ವಾರದ ಪ್ರಗತಿ ಪರೀಕ್ಷೆ ಹಾಗೂ ಕಲಿಕಾ ಚಟುವಟಿಕೆಗಳನ್ನು ಪೂರೈಸುವುದು
ಅಂತಿಮ ಹಂತದಲ್ಲಿ ಮಾರ್ಗದರ್ಶಕರ ಮುಂದೆ ಕಲಿತದ್ದರ ನಿರೂಪಣೆ ಮಾಡುವುದು
ಯಶಸ್ವಿ ಕಲಿಕೆಯ ನಂತರ ಅಧಿಕೃತ ಕನ್ನಡ ಸಾಕ್ಷರತಾ ಪ್ರಮಾಣಪತ್ರ ಪಡೆಯುವುದು
ವಿದ್ಯಾದಾನಿಗಳು
೨. ಕಲಿಸುವವರು (Teachers / Student Educators)
ಯಾರು ಭಾಗವಹಿಸಬಹುದು (ವರ್ಗಗಳು):
ಶಾಲಾ ಮಕ್ಕಳುಪೋಷಕರುಹೊರನಾಡುವ ಕನ್ನಡ ಬಲ್ಲವರುಭಾಷೆ ಬಲ್ಲ ಸುಶಿಕ್ಷಿತರುಆಸಕ್ತ ಯುವಜನರು
ಮುಖ್ಯ ಜವಾಬ್ದಾರಿ:
ಪ್ರತಿಯೊಬ್ಬರೂ ಕನಿಷ್ಠ ೧೦ ಜನ ಕಲಿಯುವವರನ್ನು ಗುರುತಿಸಿ, ಅವರಿಗೆ ೩೦ ದಿನಗಳ ಕನ್ನಡ ಭಾರತಿ ಪಠ್ಯಕ್ರಮದಂತೆ ಕಲಿಸುವುದು.
ಪ್ರಮುಖ ಕಾರ್ಯಗಳು ಮತ್ತು ನಿರೀಕ್ಷೆಗಳು:
ತಮ್ಮ ಸುತ್ತಮುತ್ತಲಿನ ೧೦ ಜನ ಕನ್ನಡೇತರರನ್ನು/ಅನಕ್ಷರಸ್ಥರನ್ನು ಪ್ರೀತಿಯಿಂದ ಪ್ರೇರೇಪಿಸುವುದು
ಮಾರ್ಗದರ್ಶಕರ ಮೇಲ್ವಿಚಾರಣೆಯಲ್ಲಿ ಸರಳ ಹಾಗೂ ಆಪ್ತ ಬೋಧನೆ ಮಾಡುವುದು
ಪ್ರತಿ ವಾರ ಕಲಿಯುವವರ ಪ್ರಗತಿಯ ವರದಿಯನ್ನು ದಾಖಲಿಸುವುದು
ಆಂದೋಲನದ ವತಿಯಿಂದ ವಿದ್ಯಾದಾನಿ ಗೌರವ ಪ್ರಮಾಣಪತ್ರ ಹಾಗೂ ಪುರಸ್ಕಾರ ಪಡೆಯುವುದು
ಮಾರ್ಗದರ್ಶಕರು
೩. ಮಾರ್ಗದರ್ಶಕರು (Mentors)
ಯಾರು ಭಾಗವಹಿಸಬಹುದು (ವರ್ಗಗಳು):
ಶಾಲಾ ಶಿಕ್ಷಕರುನಿವೃತ್ತ ನೌಕರರುಉದ್ಯೋಗಿಗಳುಅಕ್ಷರಸ್ಥ ಸಾರ್ವಜನಿಕರುಸಾಹಿತಿಗಳು
ಮುಖ್ಯ ಜವಾಬ್ದಾರಿ:
ಕಲಿಸುವ ಮಕ್ಕಳಿಗೆ ಹಾಗೂ ಸ್ವಯಂಸೇವಕರಿಗೆ ಕಲಿಕಾ ಸಾಮಗ್ರಿಗಳ ಬಳಕೆ, ಬೋಧನಾ ಕೌಶಲ ಹಾಗೂ ಮೇಲ್ವಿಚಾರಣೆಯಲ್ಲಿ ಮಾರ್ಗದರ್ಶನ ನೀಡುವುದು.
ಪ್ರಮುಖ ಕಾರ್ಯಗಳು ಮತ್ತು ನಿರೀಕ್ಷೆಗಳು:
ಪ್ರತಿ ೧೦ ಮಕ್ಕಳಿಗೆ/ಕಲಿಕಾ ಗುಂಪಿಗೆ ಪ್ರಾಯೋಗಿಕ ಮಾರ್ಗದರ್ಶನ ನೀಡುವುದು
ವಾರದ ಪ್ರಗತಿ ವರದಿಗಳನ್ನು ಪರಿಶೀಲಿಸಿ ಸಲಹೆ ನೀಡುವುದು
ಕಲಿತದ್ದರ ನಿರೂಪಣಾ ಅಧಿವೇಶನದಲ್ಲಿ ಉಪಸ್ಥಿತರಿದ್ದು ಮೌಲ್ಯಮಾಪನ ನಡೆಸುವುದು
ಪ್ರಮಾಣಪತ್ರ ವಿತರಣೆಗೆ ಅಧಿಕೃತ ಶಿಫಾರಸು ಮಾಡುವುದು
ಸಂಘಟಕರು
೪. ಸಂಘಟಕರು (Organizers)
ಯಾರು ಭಾಗವಹಿಸಬಹುದು (ವರ್ಗಗಳು):
ಜನಪ್ರತಿನಿಧಿಗಳು (ಶಾಸಕರು, ಸಂಸದರು, ಪಾಲಿಕೆ ಸದಸ್ಯರು)ಮುಖಂಡರುವಿದ್ಯಾಸಂಸ್ಥೆಗಳುಕನ್ನಡ ಸಂಘಟನೆಗಳುಅಭಿಮಾನಿಗಳು & ಕಾರ್ಯಕರ್ತರು
ಮುಖ್ಯ ಜವಾಬ್ದಾರಿ:
ಆಂದೋಲನದ ಕಾರ್ಯಕ್ರಮಗಳು ಸುಗಮವಾಗಿ ನಡೆಯಲು ಸ್ಥಳೀಯ ಸೌಲಭ್ಯಗಳು, ಜಾಗೃತಿ ಮತ್ತು ಸಾರ್ವಜನಿಕ ಸಮನ್ವಯ ಕಲ್ಪಿಸುವುದು.
ಪ್ರಮುಖ ಕಾರ್ಯಗಳು ಮತ್ತು ನಿರೀಕ್ಷೆಗಳು:
ತರಗತಿಗಳು ನಡೆಯಲು ಶಾಲಾ ಕೊಠಡಿ, ಸಮುದಾಯ ಭವನ ಅಥವಾ ಸಾರ್ವಜನಿಕ ಸ್ಥಳಗಳ ವ್ಯವಸ್ಥೆ
ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ‘ಭಾರತಿ ಟೀಚರ್’ ಚಿತ್ರ ಪ್ರದರ್ಶನ ಆಯೋಜನೆ
ಸ್ಥಳೀಯ ಮಟ್ಟದಲ್ಲಿ ಕಲಿಯುವವರು ಮತ್ತು ಕಲಿಸುವವರ ನೋಂದಣಿ ಸಮನ್ವಯ
ಸಮಾರೋಪ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮಗಳ ಆಯೋಜನೆ
ಪೋಷಕರು
೫. ದಾನಿಗಳು (Donors / Patrons)
ಯಾರು ಭಾಗವಹಿಸಬಹುದು (ವರ್ಗಗಳು):
ವೈಯಕ್ತಿಕ ದಾನಿಗಳುಸಂಘಗಳುಸಂಸ್ಥೆಗಳುಧಾರ್ಮಿಕ/ಸಾಮಾಜಿಕ ಟ್ರಸ್ಟ್ಗಳುಸರಕಾರದ ಅಂಗಸಂಸ್ಥೆಗಳುಪ್ರಾಯೋಜಕರುವಾಣಿಜ್ಯ ಉದ್ಯಮಗಳು
ಮುಖ್ಯ ಜವಾಬ್ದಾರಿ:
ಆಂದೋಲನಕ್ಕೆ ಅಗತ್ಯವಾದ ಕಲಿಕಾ ಸಾಮಗ್ರಿಗಳು, ಪುಸ್ತಕಗಳು, ಪ್ರಮಾಣಪತ್ರಗಳು ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನಗಳನ್ನು ಪ್ರಾಯೋಜಿಸುವುದು.
ಪ್ರಮುಖ ಕಾರ್ಯಗಳು ಮತ್ತು ನಿರೀಕ್ಷೆಗಳು:
ವಿದ್ಯಾರ್ಥಿಗಳಿಗೆ ಕಲಿಕಾ ಕಿಟ್ಗಳು ಹಾಗೂ ಪಠ್ಯಪುಸ್ತಕಗಳ ಪ್ರಾಯೋಜನೆ
೧೦ ಜನರಿಗೆ ಯಶಸ್ವಿಯಾಗಿ ಕಲಿಸಿದ ಮಕ್ಕಳಿಗೆ ಬಹುಮಾನ/ಪುರಸ್ಕಾರ ಪ್ರಾಯೋಜನೆ
ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಿ ಸಾಧಕರನ್ನು ಸನ್ಮಾನಿಸುವುದು
ಕನ್ನಡ ನಾಡಿನಲ್ಲಿ ಭಾಷಾ ಜಾಗೃತಿಯ ಶಾಶ್ವತ ಪರಂಪರೆಗೆ ಆರ್ಥಿಕ ಹಾಗೂ ನೈತಿಕ ಬೆಂಬಲ ನೀಡುವುದು